fbpx
ಸಮಾಚಾರ

ಇದೇ ಮೊದಲ ಬಾರಿ ಎಲಿಮಿನೇಟ್ ಆದ ಸ್ಪರ್ಧಿಯೊಬ್ಬರ ಮೇಲೆ ಗರಂ ಆದ ಕಿಚ್ಚ ಸುದೀಪ್: ಏಕೆ ಗೊತ್ತಾ?

ಬಿಗ್ ಬಾಸ್ ಮನೆಯಿಂದ ಚೈತ್ರಾ ವಾಸುದೇವನ್ ಹೊರಗೆ ಬಂದಿದ್ದಾರೆ. ಎರಡನೇ ವಾರಕ್ಕೆ ನಿರೂಪಕಿ ತಮ್ಮ ಪ್ರಯಾಣ ಅಂತ್ಯಗೊಳಿಸಿದ್ದಾರೆ. ಬಿಗ್ ಹೌಸ್​ನಿಂದ ಹೊರಬಂದು ಸೀದಾ ಕಿಚ್ಚ ಸುದೀಪ್ ಎದುರು ನಿಂತುಕೊಂಡ ಚೈತ್ರಾ ವಾಸುದೇವನ್, ತಮ್ಮ ಜರ್ನಿಯ ಕ್ಷಣಗಳನ್ನ ಮೆಲುಕು ಹಾಕಿದರು. ಈ ವೇಳೆ ಚೈತ್ರ ನೀಡಿದ ಉತ್ತರ ಒಂದು ಕಿಚ್ಚನ ಕೋಪಕ್ಕೆ ಕಾರಣವಾಯಿತು.

 

 

ಹೌದು, ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಇದೇ ಮೊದಲ ಬಾರಿ ಎಲಿಮಿನೇಟ್ ಆದ ಸ್ಪರ್ಧಿಯೊಬ್ಬರ ಮೇಲೆ ಕಿಚ್ಚ ಸುದೀಪ್ ಗರಂ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಯಾವುದೇ ಸ್ಪರ್ಧಿ ಹೊರ ಹೋಗುವ ಮುನ್ನ ವೇದಿಕೆಯಲ್ಲಿ ಕಂಟೆಸ್ಟೆಂಟ್ ಜರ್ನಿ ವಿಟಿ ವಿಡಿಯೋ ತೋರಿಸಲಾಗುತ್ತದೆ. ಹಾಗೆಯೇ ಚೈತ್ರಾ ಅವರನ್ನು ವೇದಿಕೆಗೆ ಕರೆದು ಅಭಿನಯ ಚಕ್ರವರ್ತಿ ಎರಡು ವಾರಗಳ ಜರ್ನಿಯ ಝಲಕ್ ತೋರಿಸಿದ್ದರು.

ಆದರೆ ಇದನ್ನು ನೋಡಿದ ಚೈತ್ರಾ ನೆಗೆಟಿವ್ ಮಾತುಗಳನ್ನಾಡಿದ್ದಾರೆ. ಆದರೆ ಇದನ್ನು ನೋಡಿದ ಚೈತ್ರಾ ನೆಗೆಟಿವ್ ಮಾತುಗಳನ್ನಾಡಿದ್ದಾರೆ. ಈ ಮಾತಿನಿಂದ ಬೇಸರಗೊಂಡ ಸುದೀಪ್ ಅವರು, ವೇದಿಕೆಯಲ್ಲೇ ಚೈತ್ರಾ ಅವರಿಗೆ ಕ್ಲಾಸ್ ತೆಗೆದುಕೊಂಡರು.

‘ನಾನು 7 ಸೀಸನ್ನಿಂದ ಶೋ ನಡೆಸ್ತಿದ್ದೇನೆ. ಪ್ರತಿಯೊಬ್ಬರು ವಿಟಿ ನೋಡಿ ಕಣ್ಣೀರಾಕಿದ್ದಾರೆ. ನೀವೇ ಮೊದಲು ನೆಗೆಟಿವ್ ಕಾಮೆಂಟ್ ಮಾಡಿದ್ದು. This is not Fair ಚೈತ್ರಾ. ಆನ್ ಎ ಸೀರಿಯಸ್ ನೋಟ್. ಪ್ರತಿಯೊಂದರಲ್ಲೂ ನೆಗೆಟಿವ್ ಪಾಯಿಂಟ್ಸ್ ಹುಡುಕಬೇಡಿ. ಇದುವರೆಗೂ ಮನೆಗೆ ಬಂದಿರುವ ಎಲ್ಲ ಸ್ಪರ್ಧಿಗಳಿಗೂ ಮೇಕಪ್ ಇಲ್ಲದೇ ತೋರಿಸಿದ್ದೀವಿ. ನಿಜವಾಗಲು ಅದು ತಪ್ಪಿಲ್ಲ. ಅದು ಬೆಳಿಗ್ಗೆ ಎದ್ದ ತಕ್ಷಣ ಬರುವ ಮುಗ್ದ ದೃಶ್ಯ ’’ಎಂದರು.

ಇದಕ್ಕೆ ಚೈತ್ರಾ ‘ ವಿಟಿ ಚೆನ್ನಾಗಿಲ್ಲ ಅಂತಾ ನಾನು ಹೇಳಿಲ್ಲ. ಚೆನ್ನಾಗಿದೆ ಅಂತಾ ಹೇಳಿದೆ’ ಅಂತಾ ಪ್ರತ್ಯುತ್ತರ ನೀಡಿದರು. ಇದರಿಂದ ಮತ್ತೆ ಗರಂ ಆದ ಕಿಚ್ಚ, ‘ಆ ಥರಾ ಹೇಳಬೇಡಿ. ನಾನು ಸಹ ತಪ್ಪುಗಳನ್ನು ಮಾಡಿದ್ದೇನೆ. ತಪ್ಪುಗಳನ್ನ ತಿದ್ದಿಕೊಂಡೆ ನಾನು ಇಲ್ಲಿಯವರೆಗೂ ಬಂದಿರುವೆ. ಚೈತ್ರಾ ಅವರೇ ಸುಮ್ಮನೆ ಹೇಳಬೇಡಿ. ನಾನೇನು ಸುಮ್ಮನೆ 24 ವರ್ಷ ಇಂಡಸ್ಟ್ರಿಯಲ್ಲಿದ್ದು, ಇಲ್ಲಿ ಬಂದು ನಿಂತಿಲ್ಲ. ಇದನ್ನ ನಾನು ಬಹಳ ನೊಂದುಕೊಂಡು ಹೇಳುತ್ತಿದ್ದೇನೆ” ಎಂದು ಕಿಚ್ಚನ ಮಾತಿನಲ್ಲೆ ಏಟು ಕೊಟ್ಟರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top