fbpx
ಸಮಾಚಾರ

ಭೂಗತ ಲೋಕದೊಡನೆ ಅವ್ಯವಹಾರ: ಶಿಲ್ಪಾ ಶೆಟ್ಟಿ ದಂಪತಿಗಳಿಗೆ ಸಮನ್ಸ್.

ಉದ್ಯಮಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರಿಗೆ ಜಾರಿ ನಿರ್ದೇಶನಾಲಯವು (ಇಡಿ) ಸಮನ್ಸ್ ಜಾರಿ ಮಾಡಿದ್ದು, ನವೆಂಬರ್ 4ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

 

 

ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗಿನ ಆಸ್ತಿ ಪಾಸ್ತಿ ಕಾಯುತ್ತಿದ್ದ ಇಕ್ಬಾಲ್ ಮಿರ್ಚಿಗಾಗಿ ಕೆಲಸ ಮಾಡುತ್ತಿದ್ದ ಆರೋಪಿತ ವ್ಯಕ್ತಿಯೊಬ್ಬರು ರಾಜ್ ಕುಂದ್ರಾ ಅವರ ಬಿಸಿನೆಸ್ ಪಾರ್ಟ್ನರ್ ಆಗಿದ್ದಾರೆ.. ಬರುವ ನವೆಂಬರ್ 4ರಂದು ಮುಂಬೈನಲ್ಲಿನ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕೆಂದು ಶಿಲ್ಪಾ ಶೆಟ್ಟಿ-ಕುಂದ್ರಾ ದಂಪತಿಗಳಿಗೆ ಸೂಚಿಸಲಾಗಿದೆ. ಐಪಿಎಲ್ ಮ್ಯಾಚ್ ಫಿಕ್ಸಿಂಗ್, ಬಿಟ್ ಕಾಯಿನ್ ಅವ್ಯವಹಾರಗಳಲ್ಲಿ ಕೂಡ ಈ ದಂಪತಿಗಳ ಹೆಸರಿದೆ.

ಅಂದಹಾಗೆ ಇಕ್ಬಾಲ್ ಮಿರ್ಚಿ ದಾವೂದ್ ಇಬ್ರಾಹಿಂ ಬಲಗೈ ಬಂಟರ ಪೈಕಿ ಒಬ್ಬನಾಗಿದ್ದ. ಮುಂಬೈನ ಅನೇಕ ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ. ಜೊತೆಗೆ ಮಾದಕ ದವ್ಯ ಸಾಗಾಣಿಕೆ, ಬೆದರಿಕೆ, ಆಸ್ತಿ ಕಬಳಿಕೆ ಸೇರಿದಂತೆ ಅನೇಕ ಅವ್ಯವಹಾರಗಳನ್ನು ಇಕ್ಬಾಲ್ ಮಿರ್ಚಿ ನೋಡಿಕೊಳ್ಳುತ್ತಿದ್ದ. ಲಂಡನ್‍ನಲ್ಲಿದ್ದ ಇಕ್ಬಾಲ್ ಮಿರ್ಚಿ ಹೃದಯಾಘಾತದಿಂದ 2013ರಲ್ಲಿ ಮೃತಪಟ್ಟಿದ್ದ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top