fbpx
ಸಮಾಚಾರ

ದ್ರುವ ಸರ್ಜಾ ಪ್ರೇರಣಾ ಮದುವೆಯ ವಿಶೇಷ ಲಗ್ನ ಪತ್ರಿಕೆ: ಹೇಗಿದೆ ಗೊತ್ತಾ ಆ್ಯಕ್ಷನ್ ಪ್ರಿನ್ಸ್​ ವೆಡ್ಡಿಂಗ್ ಕಾರ್ಡ್?

ಧ್ರುವ ಸರ್ಜಾ- ಪ್ರೇರಣಾ ವಿವಾಹಕ್ಕೆ ದಿನಗಣನೆ ಶುರುವಾಗಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡು ಮದುವೆ ಸಿದ್ಧವಾಗುತ್ತಿರುವ ಕನ್ನಡ ಚಿತ್ರರಂಗದ ಮುದ್ದಾದ ಜೋಡಿ ಎನಿಸಿಕೊಂಡಿರುವ ಧ್ರುವ ಸರ್ಜಾ- ಪ್ರೇರಣಾ ಜೋಡಿಯ ಮದುವೆಯ ಡೇಟ್ ಫಿಕ್ಸ್ ಆಗಿದ್ದು ಈ ಜೋಡಿಯ ಲಗ್ನ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

 

ವಿಶೇಷ ಆಹ್ವಾನ ಪತ್ರಿಕೆಯಲ್ಲಿ ಆಂಜನೇಯನ ಚಿತ್ರವಿದೆ. ಇನ್ವಿಟೇಷನ್​ನಲ್ಲಿ ಧ್ರುವಾ – ಪ್ರೇರಣಾ ಅವರ ಸ್ಪೆಷಲ್‌ ಫೋಟೋವಿದೆ. ಕರ್ನಾಟಕದ ಐತಿಹಾಸಿಕ ಸ್ಥಳದಲ್ಲಿ ಇಬ್ಬರ ಪೋಟೋ ಶೂಟ್​ ನಡೆದಿದ್ದು ತುಂಬಾನೇ ಆಕರ್ಷಕವಾಗಿದೆ.

ನವೆಂಬರ್ 24ಕ್ಕೆ ಧ್ರುವ ಸರ್ಜಾ, ಪ್ರೇರಣಾ ಮದುವೆ ಫಿಕ್ಸ್ ಆಗಿದೆ. ನವೆಂಬರ್ 24ರ ಭಾನುವಾರ ಬೆಳಗ್ಗೆ 7 ಗಂಟೆ 15ನೇ ನಿಮಿಷದಿಂದ 7 ಗಂಟೆ 45 ನಿಮಿಷದವರೆಗೆ ಮುಹೂರ್ತ. ವೃಶ್ಚಿಕ ಲಗ್ನದಲ್ಲಿ ವಿವಾಹ ಮಹೋತ್ಸವ ನಡೆಯಲಿದೆ. ಜೆಪಿ ನಗರದ 7ನೇ ಹಂತದಲ್ಲಿರುವ ಸಂಸ್ಕೃತಿ ಬೃಂದಾವನ ಕನ್ವೆನ್ಷನ್ ಹಾಲ್‌ನಲ್ಲಿ ವಿವಾಹ ಮಹೋತ್ಸವ ಸಮಾರಂಭವಾಗಲಿದೆ. ಇನ್ನೂ ಅದೇ ದಿನ ಸಂಜೆ 7. 30 ರಿಂದ ಆರತಕ್ಷತೆ ಅರೆಂಜ್ ಮಾಡಲಾಗಿದೆ.

ಯಾರಿದು ಪ್ರೇರಣಾ ಶಂಕರ್?
ಪ್ರೇರಣಾ ಶಂಕರ್ ಅವ್ರು ದೃವಾ ಸರ್ಜಾ ಮನೆಯಿರುವ ಏರಿಯಾದಲ್ಲೇ ವಾಸಿಸುತ್ತಿದ್ದು ದೃವಾಗೆ ಬಾಲ್ಯದ ಗೆಳತಿಯಾಗಿದ್ದಾರೆ. ದ್ರುವ ಸರ್ಜಾರ ಆಪ್ತರಲ್ಲಿ ಗುರುತಿಸಿಕೊಂಡಿರುವ ಪ್ರೇರಣಾ ಸರ್ಜಾ ಕುಟುಂಬದಲ್ಲೂ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ.. ಅಲ್ಲದೆ ಇಬ್ಬರ ಕುಟುಂಬಗಳ ಸ್ನೇಹವೂ ತುಂಬಾ ಚೆನ್ನಾಗಿಯೇ ಇದೆ. ಮೊದಲು ಸ್ನೇಹಿತರಾಗಿ ಗುರುತಿಸಿಕೊಂಡಿದ್ದ ದ್ರುವ ಮತ್ತು ಪ್ರೇರಣಾ ನಂತರ ಪ್ರೇಮದ ಬಲೆಯಲ್ಲಿ ಬಿದ್ದಿದ್ದರು.. ಬಹುವರ್ಷಗಳಿಂದ ತಮ್ಮ ಪ್ರೀತಿಯನ್ನು ಕಾಪಿಟ್ಟುಕೊಂಡು ಬಂದಿರುವ ಈ ಜೋಡಿ ಪರಸ್ಪರ ಎರಡೂ ಕುಟುಂಬಗಳ ಸಮ್ಮಿತಿಯೊಂದಿಗೆ ಮದುವೆ ಮಾಡಿಕೊಳ್ಳುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top