fbpx
ಸಮಾಚಾರ

“ಹ್ಯಾಟ್ರಿಕ್‌ ಹೀರೋ ಅಂದ್ರೆ ಶಿವಣ್ಣ ಒಬ್ಬರೇ” ಚಾಲೆಂಜಿಂಗ್ ಸ್ಟಾರ್ ದರ್ಶನ್‌

ಈ ವರ್ಷ ದರ್ಶನ್ ಅಭಿನಯಿಸಿದ್ದ ‘ಯಜಮಾನ’ ಹಿಟ್‌ ಆಯಿತು. ‘ಕುರುಕ್ಷೇತ್ರ’ ಚಿತ್ರವೂ ಕೂಡ ಶತ ದಿನೋತ್ಸವ ಕಂಡಿತು. ಈಗ ‘ಒಡೆಯ’ ಮೂಲಕ ಹ್ಯಾಟ್ರಿಕ್‌ ಬಾರಿಸಬಹುದಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ದರ್ಶನ್‌ ಕೊಟ್ಟಪ್ರತಿಕ್ರಿಯೆ ಹೀಗಿತ್ತು. ‘ಒಡೆಯ’ ಸಿನಿಮಾದ ಪ್ರೆಸ್ ಮೀಟ್ ನಲ್ಲಿ ಈ ಮಾತು ದರ್ಶನ್ ಬಾಯಿಂದ ಬಂದಿದೆ. ಈ ವರ್ಷ ಹ್ಯಾಟ್ರಿಕ್ ಸಿನಿಮಾ ನೀಡುತ್ತಿದ್ದೀರಿ ಎಂದಾಗ ತಮಗೆ ಹೇಳಿದಾಗ ನಾನಲ್ಲ ಶಿವಣ್ಣ ಹ್ಯಾಟ್ರಿಕ್ ಹೀರೋ ಎಂದು ದರ್ಶನ್ ಹೇಳಿದರು.

‘ನನಗೆ ಗೊತ್ತಿರುವಂತೆ ಕನ್ನಡ ಚಿತ್ರರಂಗಕ್ಕೆ ಶಿವಣ್ಣ ಒಬ್ಬರೇ ಹ್ಯಾಟ್ರಿಕ್‌ ಹೀರೋ. ಅವರಿಗೆ ನನ್ನ ಕಂಪೇರ್‌ ಮಾಡಬೇಡಿ. ‘ಒಡೆಯ’ ಸಿನಿಮಾದ ಬಗ್ಗೆ ನನಗೂ ಕುತೂಹಲವಿದೆ. ಹ್ಯಾಟ್ರಿಕ್‌- ಗೀಟ್ರಿಕ್‌ ಎಲ್ಲವೂ ಪ್ರೇಕ್ಷಕರಿಗೆ ಬಿಟ್ಟಿದ್ದು. ಅವರಿಗೆ ಮನರಂಜನೆ ನೀಡುವಂತಹ ಸಿನಿಮಾ ಕೊಡಬೇಕೆನ್ನುವುದಷ್ಟೇ ನಮ್ಮ ಕೆಲಸ’ ಎನ್ನುವುದು ದರ್ಶನ್‌ ಕೊಟ್ಟಉತ್ತರ.

ಅಂದಹಾಗೆ, ದರ್ಶನ್ ಅಭಿನಯದ ‘ಒಡೆಯ’ ಸಿನಿಮಾ ಡಿಸೆಂಬರ್ 12 ರಂದು ಬಿಡುಗಡೆ ಆಗುತ್ತಿದೆ. ಎಂ ಡಿ ಶ್ರೀಧರ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಸನಾ ತಿಮ್ಮಯ್ಯ ನಾಯಕಿ ಆಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top