ಭಾರತ ಕ್ರೀಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ದೋನಿ ವಿರುದ್ಧ FIR ದಾಖಲು ಮಾಡಲಾಗಿದೆ. ನವೆಂಬರ್ 27ರಂದು ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು ಹೊಸ ಎಫ್ಐಆರ್ ದಾಖಲಿಸಿದೆ, ಇದರಲ್ಲಿ ಎಂಎಸ್ ಧೋನಿ ಕೂಡ ಹೆಸರಿಸಲಾಗಿದೆ ಎನ್ನಲಾಗಿದೆ. ಧೋನಿ ಈ ಗುಂಪಿನ ಬ್ರಾಂಡ್ ಅಂಬಾಸಿಡರ್ ಆಗಿದ್ದರು ಮತ್ತು ಅವರು ಅಮ್ರಪಾಲಿಯನ್ನು ಉತ್ತೇಜಿಸಿದರು ಈ ಕಾರಣಕ್ಕಾಗಿ ಅವರ ವಿರುದ್ದ ಕೂಡ ದೂರ ದಾಖಲಾಗಿದೆ ಎನ್ನಲಾಗಿದೆ.
ಫ್ಲ್ಯಾಟ್ ನೀಡುವುದಾಗಿ ಹಲವರಿಂದ ಹಣ ಪಡೆದು ವಂಚಿಸಿದ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಂತ್ರಸ್ತರು ಈಗ ಧೋನಿ ಮುಖ ನೋಡಿಕೊಂಡು ಹಣ ಹೂಡಿಕೆ ಮಾಡಿದ್ದೆವು. ಈಗ ಧೋನಿಯೂ ಇದಕ್ಕೆ ಉತ್ತರವಾದಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಧೋನಿ ಒಡೆತನದ ಅಮ್ರಪಾಲಿ ಮಾಹಿ ಡೆವೆಲಪರ್ಸ್ಸ್ ಹಾಗೂ ರಿತಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಕಂಪನಿಗಳಿಗೆ ಅಕ್ರಮವಾಗಿ ಹಣವನ್ನು ವರ್ಗಾವಣೆ ಆಗಿದೆ. ಇದೊಂದು ಶಾಮ್ ಡೀಲ್ (ನಕಲಿ ಒಪ್ಪಂದ) ಆಗಿದ್ದು, ಈ ಹಣವನ್ನು ವಶಪಡಿಸಿಕೊಳ್ಳಬೇಕು ಎಂದು ವಿಧಿವಿಜ್ಞಾನ ಲೆಕ್ಕ ಪರಿಶೋಧಕರು ಸುಪ್ರೀಂಕೋರ್ಟ್ಗೆ ತಿಳಿಸಿದ್ದಾರೆ.
ಅಮ್ರಪಾಲಿ ಗ್ರೂಪ್ 2009ರಿಂದ 2015ರ ಅವಧಿಯಲ್ಲಿ ರಿತಿ ಸ್ಪೋಟ್ಸ್ರ್ ಮ್ಯಾನೆಜ್ಮೆಂಟ್ ಕಂಪನಿಗೆ 42.22 ಕೋಟಿ ರು.ಗಳನ್ನು ವರ್ಗಾಯಿಸಿದೆ. ಈ ಹಣದಲ್ಲಿ 6.52 ಕೋಟಿ ರು. ಮೊತ್ತವನ್ನು ಅಮ್ರಪಾಲಿ ಶಫೈರ್ ಡೆವೆಲಪರ್ರ್ಸ್ ಪಾವತಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಧೋನಿ ಪತ್ನಿ ಸಾಕ್ಷಿ ಅಮ್ರಪಾಲಿ ಮಾಹಿ ಡೆವೆಲಪರ್ಸ್ನ ನಿರ್ದೇಶಕಿಯಾಗಿದ್ದಾರೆ. ರಿತಿ ಸ್ಫೋಟ್ಸ್ರ್ನಲ್ಲಿ ಧೋನಿ ಪ್ರಮುಖ ಪಾಲುದಾರರಾಗಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
