fbpx
ಸಮಾಚಾರ

ಅತ್ಯಾಚಾರಿಗಳ ಎನ್‌ಕೌಂಟರ್: ಪೊಲೀಸರ ಮೇಲೆ ‘ಹೂ’ ಮಳೆಗರೆದ ಸಾರ್ವಜನಿಕರು!

ತೆಲಂಗಾಣದ ಪಶುವೈದ್ಯೆಯನ್ನು ಅತ್ಯಾಚಾರವೆಸಗಿ ಸುಟ್ಟು ಹತ್ಯೆಮಾಡಿದ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್‌ಕೌಂಟರ್ ಮಾಡಲಾಗಿದೆ. ವೈದ್ಯೆಯನ್ನು ಹತ್ಯೆ ಮಾಡಿದ ಸ್ಥಳಕ್ಕೆ ಮಹಜರು ಮಾಡಲು ಕರೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿಗಳಾದ ಮೊಹಮ್ಮದ್ ಆರಿಫ್, ಜೊಲ್ಲು ಶಿವಾ, ಜೊಲ್ಲು ನವೀನ್ ಕುಮಾರ್ ಮತ್ತು ಚೆನ್ನ ಕೇಶವುಲು ಪರಾರಿಯಾಗಲು ಯತ್ನಿಸಿದಾಗ ಈ ಎನ್‌ಕೌಂಟರ್ ನಡೆದಿದೆ.

ಎನ್ ಕೌಂಟರ್ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನೂರಾರು ಮಂದಿ ಧಾವಿಸಿದ್ದು, ಪೊಲೀಸರ ಪರವಾಗಿ ಘೋಷಗಳನ್ನು ಕೂಗುತ್ತಿದ್ದಾರೆ.ಪೊಲೀಸರನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆಯನ್ನೂ ಜನರು ಮಾಡಿದ್ದಾರೆ. ಎನ್‌ಕೌಂಟರ್‌ ನಲ್ಲಿ ಮುಖ್ಯಪಾತ್ರ ವಹಿಸಿದ್ದ ಕರ್ನಾಟಕದ ಅಧಿಕಾರಿ ಸಜ್ಜನವರ್ ಅವರ ಪರವಾಗಿ ಭಾರಿ ಜಯಘೊಷಿಗಳು ಕೇಳಿಬರುತ್ತಿವೆ.

ಎನ್‌ಕೌಂಟರ್ ನಡೆದ ಬೆನ್ನಲ್ಲೇ, ದೇಶದಾದ್ಯಂತ ಜನರು ಪಟಾಕಿ ಸಿಡಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಜನರು ಎನ್‌ಕೌಂಟರ್ ನಡೆಸಿದ ವಿ. ಸಿ,. ಸಜ್ಜನರ್ ನೇತೃತ್ವದ ಪೊಲೀಸ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದು, ಹೈದರಾಬಾದ್ ಪೊಲೀಸರು ಕಾಣಲು ಸಿಕ್ಕಲ್ಲೆಲ್ಲಾ ಹೂವಿನ ಮಳೆ ಸುರಿಸುತ್ತಿದ್ದಾರೆ.

 

 

ಏನಿದು ಪ್ರಕರಣ?
ನವೆಂಬರ್ 27ರಂದು 26 ವರ್ಷದ ಪಶುವೈದ್ಯೆಯನ್ನು ಸ್ಕೂಟಿ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮೊಹಮ್ಮದ್ ಪಾಷಾ, ಮೂವರು ಕ್ಲೀನರ್ ಗಳಾದ ನವೀನ್, ಚೆನ್ನಕೇಶವುಲು ಮತ್ತು ಶಿವಾ ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಾಬಾದ್ ಪೊಲೀಸರು, ನಾಲ್ವರು ಮೃಗೀಯ ಮನುಷ್ಯರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಈ ಕೃತ್ಯಕ್ಕೆ ಇವರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top