fbpx
ಸಮಾಚಾರ

“ನಾನೂ ಕೂಡ ಒಂದು ಹೆಣ್ಣು ಮಗುವಿನ ತಂದೆ” ಉಪೇಂದ್ರ ಹೀಗೆ ಹೇಳಿದ್ಯಾಕೆ?

ಹೈದರಾಬಾದ್ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿ ಹತ್ಯೆಗೈದಿದ್ದರು. ಆದರೆ ಈ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಇದರಿಂದ ಆಕ್ರೋಶಗೊಂಡ ನೆಟ್ಟಿಗರು ಉಪೇಂದ್ರರನ್ನು ಟೀಕೆ ಮಾಡಿದ್ದರು. ಇದೀಗ ಈ ಬಗ್ಗೆ ಉಪೇಂದ್ರ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಟ್ವೀಟ್ ಗೆ ನಿಂದಿಸಿರುವವರಿಗೆ ಉಪೇಂದ್ರ ಮತ್ತೆ ಟ್ಟಿಟ್ಟರ್ ನಲ್ಲೇ ಉತ್ತರ ನೀಡಿದ್ದಾರೆ. ಎನ್ ಕೌಂಟರ್ ಗಳು ,ಪ್ರಭಾವಿಗಳಿಂದ ದುರುಪಯೋಗವಾಗಬಾರದು, ನ್ಯಾಯಾಂಗ ವ್ಯವಸ್ಥೆಯನ್ನು ಸರ್ಕಾರ ಚುರುಕುಗೊಳಿಸಬೇಕು ಎಂಬದಷ್ಟೇ ನನ್ನ ಉದ್ದೇಶವಾಗಿತ್ತುಎಂದು ಹೇಳಿದ್ದಾರೆ.

 

 

ನೆಟ್ಟಿಗರು ಮಾಡಿದ ಅಸಭ್ಯ ಕಮೆಂಟ್‍ಗೆ ಉಪೇಂದ್ರ ಅವರು ತುಂಬಾ ಬೇಸರ ಮಾಡಿಕೊಂಡಿದ್ದಾರೆ. ನಂತರ ಈ ಬಗ್ಗೆ ಟ್ವೀಟ್ ಮಾಡಿ, “ಎನ್‌ಕೌಂಟರ್‌ಗಳು ಪ್ರಭಾವಿಗಳಿಂದ ದುರುಪಯೋಗವಾಗಬಾರದು, ನ್ಯಾಯಾಂಗ ವ್ಯವಸ್ಥೆಯನ್ನು ಸರ್ಕಾರ ಚುರುಕುಗೊಳಿಸಬೇಕು ಎಂಬುದಷ್ಟೇ ನನ್ನ ಉದ್ದೇಶವಾಗಿತ್ತು. ನಾನೂ ಒಂದು ಹೆಣ್ಣು ಮಗುವಿನ ತಂದೆ. ಅತ್ಯಾಚಾರಿಗಳ ಪರವಾಗಿ ಮಾತನಾಡಿದೆ ಎಂದು ಬಿಂಬಿಸುವಂತಹ ಹ್ಯೇಯ ಮನಸಿನ ಜನ ಈ ಸಮಾಜದಲ್ಲಿ(ಕೆಲವರು ನನ್ನ ಜೊತೆಗೇ ) ಇದ್ದಾರಲ್ಲ ಎಂದು ನೋವಾಗುತ್ತಿದೆ” ಎಂದು ತಮ್ಮನ್ನು ಟೀಕೆ ಮಾಡಿದವರಿಗೆ ಉತ್ತರ ಕೊಟ್ಟಿದ್ದಾರೆ.

ಈ ಹಿಂದೆ “ಈ ನಾಲ್ಕು ಹುಡುಗರೇ ಆಕೆಯನ್ನು ರೇಪ್ ಮಾಡಿ ಸುಟ್ಟುಹಾಕಿದ್ದಾರೋ ಇಲ್ಲ ಇದರ ಹಿಂದೆ ಬೇರೆ ಯಾರೋ ಪ್ರಮುಖ ವ್ಯಕ್ತಿಗಳ ಕೈವಾಡವಿದೆಯೊ? ಈ ರೀತಿಯ ಎನ್ಕೌಂಟರ್ ಪ್ರಮುಖ ವ್ಯಕ್ತಿಗಳ ಕೇಸಲ್ಲಿ ಯಾಕಾಗುವುದಿಲ್ಲ? ಕೋರ್ಟಿನಲ್ಲಿ ವಿಚಾರಣೆಗೂ ಮುನ್ನ ನಡೆದ ಈ ಎನ್ಕೌಂಟರ್ ಇನ್ನು ಮುಂದೆ ಪ್ರಭಾವಶಾಲೀ ಭ್ರಷ್ಟ ರೇಪಿಷ್ಟ್ ಗಳಿಗೆ ರತ್ನಗಂಬಳಿಯಾಗುವುದೇ?” ಎಂದು ಉಪೇಂದ್ರ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನೆಟ್ಟಿಗರು ಅರ್ಥೈಸಿಕೊಳ್ಳುವಲ್ಲಿ ವಿಫಲವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top