fbpx
ಸಮಾಚಾರ

ಉಚ್ಚ ನ್ಯಾಯಾಲಯದಲ್ಲಿ ಕನ್ನಡದಲ್ಲಿ ಕಾರ್ಯ ನಿರ್ವಹಿಸುವ ಬಗ್ಗೆ ಜಿಸಿ ಚಂದ್ರಶೇಖರ್ ಮನವಿ

ಉಚ್ಚ ನ್ಯಾಯಾಲಯದಲ್ಲಿ ಕನ್ನಡದಲ್ಲಿ ಕಾರ್ಯ ನಿರ್ವಹಿಸುವ ಬಗ್ಗೆ ರಾಜ್ಯ ಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅವರು ಬೆಂಬಲ ಸೂಚಿಸಿದ್ದಾರೆ. ಖಾಸಗಿ ವಾಹಿನಿಯೊಂದಿಗೆ ನಡೆದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಅವರು ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ಕಾರ್ಯನಿರ್ವಹಿಸುವುದಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ” ಎಂದು ಹೇಳಿದ್ದು ಹಾಗೂ ಈಗಾಗಲೇ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯವಾದಿಗಳಿಗೆ ಮತ್ತು ನ್ಯಾಯಮೂರ್ತಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

“ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ಕಾರ್ಯನಿರ್ವಹಿಸುವುದನ್ನು ನಾನು ಸಂಪೂರ್ಣವಾಗಿ ಸ್ವಾಗತಿಸುತ್ತೇನೆ. ನ್ಯಾಯಾಲಯದ ತೀರ್ಪುಗಳು ಮನುಷ್ಯನ ಭವಿಷ್ಯವನ್ನು ತೀರ್ಮಾನ ಮಾಡುತ್ತವೆ. ಯಾವುದೇ ಪ್ರಕರಣದಲ್ಲಿ ನ್ಯಾಯವಾದಿಗಳು ತನ್ನ ಕಕ್ಷಿದಾರನಿಗೆ ಅರ್ಥವಾಗುವ ಭಾಷೆಯಲ್ಲಿ ವಾದ ಮಂಡಿಸಿದರೆ ಮಾತ್ರ ಕಕ್ಷಿದಾರ ಸಂಪೂರ್ಣ ವಿಷಯಗಳನ್ನು ನ್ಯಾಯಮೂರ್ತಿಗಳ ಗಮನಕ್ಕೆ ತರಲು ಸುಲಭವಾಗುತ್ತದೆ”

 

 

“ಇತ್ತೀಚಿಗೆ ತಂತ್ರಜ್ಞಾನ ಬಹಳ ಮುಂದುವರೆದಿರುವುದರಿಂದ ನ್ಯಾಯವಾದಿಗಳು ವಾದ ಮಾಡುತ್ತಿರುವಾಗ ಸಮಾನಾಂತರವಾಗಿ ಆ ತಕ್ಷಣವೇ ನ್ಯಾಯಮೂರ್ತಿಗಳು ತಮಗೆ ಬೇಕಾದ ಭಾಷೆಯಲ್ಲಿ ಆಲಿಸಿಕೊಳ್ಳಬಹುದು. ಭಾಷಾಂತರ ಮಾಡುವುದು ಈಗ ಅಷ್ಟು ಸುಲಭವಾಗಿದೆ, ಹಾಗಾಗಿ ನ್ಯಾಯಾಲಯದ ಕಾರ್ಯ ನಿರ್ವಹಣೆ ಕನ್ನಡದಲ್ಲಿಯೇ ಆದರೆ ಎಲ್ಲರಿಗೂ ಅನುಕೂಲ” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

“ನಾನು ಇತ್ತೀಚಿಗೆ ಕೇಳಿರುವ ಪ್ರಕಾರ ನ್ಯಾಯಾಲಯಗಳಲ್ಲಿ ಬೆರಳಚ್ಚುಗಾರರ ಕೊರತೆ ಎದ್ದು ಕಾಣುತ್ತಿದೆ. ಇದರಿಂದಲೂ ಕೂಡ ತುಂಬಾ ಸಮಸ್ಯೆಗಳು ಉದ್ಭವಿಸುತ್ತವೆ. ಆದ ಕಾರಣ ಬೆರಳಚ್ಚುಗಾರರನ್ನ ತರಬೇತಿ ಕೊಟ್ಟು ಖಾಲಿ ಇರುವ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುತೇನೆ. ಹಾಗೆಯೇ ಕನ್ನಡದಲ್ಲಿ ವಾದಗಳನ್ನು ಮಂಡಿಸುವುದರ ಬಗ್ಗೆ ಹಾಗೂ ಕನ್ನಡದಲ್ಲಿಯೇ ತೀರ್ಪನ್ನು ಪ್ರಕಟಿಸುವದರ ಬಗ್ಗೆ ನಾನು ಪತ್ರ ಮುಖೇನ ಮುಖ್ಯಮಂತ್ರಿಗಳಲ್ಲಿ ಮತ್ತು ಗೌರವಾನ್ವಿತ ನ್ಯಾಯಮೂರ್ತಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ” ಎಂದು ಜಿಸಿ ಚಂದ್ರಶೇಖರ್ ಅವರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top