fbpx
ಸಮಾಚಾರ

‘ಮಗಳು ಜಾನಕಿ’ ಫೋಟೋ ರಿವೀಲ್ ಮಾಡಿದ ಶ್ರುತಿ ಹರಿಹರನ್!

ನಾತಿಚರಾಮಿ ಚಿತ್ರದ ಬಳಿಕ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದ ಶ್ರುತಿ ಹರಿಹರನ್ ಸದ್ಯ ತಾಯಿ ಆಗಿದ್ದು ತಮ್ಮ ಮುದ್ದು ಮಗಳ ಲಾಲನೆ ಪಾಲನೆಯಲ್ಲಿ ಮಗ್ನರಾಗಿದ್ದಾರೆ. ಇದೀಗ ಶ್ರುತಿ ಹರಿಹರನ್ ತಮ್ಮ ಪುತ್ರಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

 

ಈಗ ತಮ್ಮ ಮಗಳ ಫೋಟೋ ಶೂಟ್‌ ಮಾಡಿಸಿರುವುದನ್ನು ಶೇರ್ ಮಾಡಿಕೊಂಡಿದ್ದಾರೆ. ಜಾನಕಿಗೆ 16 ದಿನಗಳಿದ್ದಾಗ ಈ ಶೂಟ್ ಮಾಡಿಸಲಾಗಿದೆ. Tiny Yours ಕ್ಲಿಕ್‌ ಮಾಡಿರುವ ಫೋಟೋಗೆ ‘ಮಕ್ಕಳು ಮಲಗುವುದನ್ನು ನೋಡುವುದಕ್ಕೇ ಖುಷಿ. ಮಿಸ್ J ಅನ್ನು ಬಟ್ಟೆಯಲ್ಲಿ ಸುತ್ತಿ ಹೆಡ್‌ಬ್ಯಾಂಡ್‌ ಹಾಕಿರುವುದನ್ನು ನೋಡುವುದೇ ಆನಂದ. ಅದರಲ್ಲೂ ಜಾನಕಿ ನೆಮ್ಮದಿಯಾಗಿ ನಿದ್ರಿಸಿದಳು’ ಎಂದು ಬರೆದುಕೊಂಡಿದ್ದಾರೆ.

ಶ್ರುತಿ ಹರಿಹರನ್ ಅವರು ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಈವರೆಗೂ ಮಗಳ ಫೋಟೋವನ್ನು ರಿವೀಲ್ ಮಾಡಿರಲಿಲ್ಲ. ಹೀಗಾಗಿ ಅಭಿಮಾನಿಗಳು ಕೂಡ ಜೂ.ಶ್ರುತಿ ಹರಿಹರನ್​ ಫೋಟೋಗಾಗಿ ಕಾಯುತ್ತಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top