fbpx
ಸಮಾಚಾರ

ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ: ಇಬ್ಬರು ಕನ್ನಡಿಗರಿಗೆ ಸ್ಥಾನ!

ನ್ಯೂಜಿಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಜನವರಿ 24 ರಿಂದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಆರಂಭಗೊಳ್ಳಲಿದೆ. 5 ಟಿ20, 3 ಏಕದಿನ, ಹಾಗೂ 2 ಟೆಸ್ಟ್ ಸರಣಿ ನಡೆಯಲಿದೆ. ಸದ್ಯ 5 ಟಿ20 ಪಂದ್ಯಗಳ ಸರಣಿಗೆ 16 ಆಟಗಾರನ್ನೊಳಗೊಂಡ ಟೀಂ ಇಂಡಿಯಾ ಪ್ರಕಟಿಸಲಾಗಿದೆ. ಬಲಿಷ್ಠ ತಂಡದಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿ ತಂಡದ ನಾಯಕತ್ವ ವಹಿಸಿದ್ದು, ರೋಹಿತ್ ಶರ್ಮಾ ಮತ್ತೆ ತಂಡ ಕೂಡಿಕೊಂಡಿದ್ದಾರೆ. ಕಮ್ ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ನಿರಾಸೆ ಅನುಭವಿಸಿದ್ದು, ಫಿಟ್ ನೆಸ್ ಕೊರತೆಯಿಂದಾಗಿ ತಂಡಕ್ಕೆ ಆಯ್ಕೆಯಾಗಲಿಲ್ಲ. ಮೊಹಮ್ಮದ್ ಶಮಿ ಮತ್ತೆ ತಂಡ ಕೂಡಿಕೊಂಡಿದ್ದು ಉಳಿದಂತೆ ಲಂಕಾ ವಿರುದ್ಧದ ತಂಡ ಉಳಿಸಲಾಗಿದೆ. ಜನವರಿ 24ರಿಂದ ಟಿ ಟ್ವೆಂಟಿ ಸರಣಿ ಆರಂಭವಾಗಲಿದೆ.

ಈ ಸರಣಿಯಿಂದಲೂ ಹಿರಿಯ ಕ್ರಿಕೆಟಿಗ ಧೋನಿ ಹೊರಗುಳಿದಿದ್ದಾರೆ. ಈ ಮೂಲಕ ಧೋನಿ ತಂಡ ಕೂಡಿಕೊಳ್ಳಬಹುದೆಂದು ನಿರೀಕ್ಷೆ ಮಾಡಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ. ಇನ್ನು ಲಂಕಾ ವಿರುದ್ಧ ಸ್ಥಾನ ಪಡೆದಿದ್ದ ಯುವ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ನನ್ನು ಮತ್ತೆ ಹೊರಗಿರಿಸಲಾಗಿದೆ.

ನ್ಯೂಝಿಲ್ಯಾಂಡ್ ವಿರುದ್ದದ ಸರಣಿಗೆ ಟೀಂ ಇಂಡಿಯಾ ಈ ರೀತಿ ಇದೆ:
1. ವಿರಾಟ್ ಕೊಹ್ಲಿ (ನಾಯಕ), 2. ರೋಹಿತ್ ಶರ್ಮಾ (ಉಪನಾಯಕ), 3. ಕೆಎಲ್ ರಾಹುಲ್, 4. ಶಿಖರ್ ಧವನ್, 5. ಶ್ರೇಯಸ್ ಅಯ್ಯರ್, 6. ರಿಷಬ್ ಪಂತ್ (ವಿಕೆಟ್ ಕೀಪರ್), 7. ಕುಲ್‌ದೀಪ್ ಯಾದವ್, 8. ಯುಜ್ವೇಂದ್ರ ಚಹಲ್, 9. ಮನೀಶ್ ಪಾಂಡೆ, 10. ಶಿವಂ ದುಬೆ, 11. ಜಸ್ಪ್ರೀತ್ ಬುಮ್ರಾ, 12. ಶಾರ್ದೂಲ್ ಠಾಕೂರ್, 13. ನವದೀಪ್ ಸೈನಿ, 14. ವಾಷಿಂಗ್ಟನ್ ಸುಂದರ್, 15. ರವೀಂದ್ರ ಜಡೇಜಾ, 16. ಮೊಹಮ್ಮದ್ ಶಮಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top