fbpx
ಸಮಾಚಾರ

ಬಿಗ್ ಬಾಸ್ ಕನ್ನಡ ಸೀಸನ್ 7: ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಟ್ಟ ಮೊದಲ ಸ್ಪರ್ಧಿ ಇವರೆ

ಈ ವಾರದ ‘ಟಿಕೆಟ್ ಟು ಫಿನಾಲೆ’ ಟಾಸ್ಕ್‌ನಲ್ಲಿ ಅತ್ಯಧಿಕ ಪದಕಗಳನ್ನು ಗೆಲ್ಲುವ ಮೂಲಕ ವಾಸುಕಿ ವೈಭವ್ ಫೈನಲ್‌ಗೆ ನೇರವಾಗಿ ಪ್ರವೇಶಿಸಿದ್ದಾರೆ. ಈ ಮೂಲಕ ವಾಸುಕಿ ವೈಭವ್‌ ಬಿಗ್‌ಬಾಸ್ ಸೀಸನ್‌-7ನ ಫೈನಲ್‌ ತಲುಪಿದ ಮೊದಲ ಕಂಟೆಸ್ಟೆಂಟ್‌ ಆಗಿದ್ದಾರೆ.

 

 

ಈ ವಾರ ಟಿಕೆಟ್ ಟು ಫಿನಾಲೆ ಸ್ಪರ್ಧೆ ನಡೆದಿತ್ತು. ಅಂದರೆ ಬಿಗ್‍ಬಾಸ್ ಕಾಲಕಾಲಕ್ಕೆ ಟಾಸ್ಕ್ ಕೊಡುತ್ತಿದ್ದರು. ಆ ಟಾಸ್ಕ್ ನಲ್ಲಿ ಗೆದ್ದವರಿಗೆ ಬಿಗ್‍ಬಾಸ್ ಒಂದು ಪದಕ ಕೊಡುತ್ತಿದ್ದರು. ವಾರದ ಕೊನೆಯಲ್ಲಿ ಅತಿ ಹೆಚ್ಚು ಪದಕ ಗೆದ್ದ ಒಬ್ಬ ಸದಸ್ಯ ಮುಂದಿನ ವಾರಕ್ಕೆ ಇಮ್ಯುನಿಟಿ ಪಡೆದು ಫಿನಾಲೆ ತಲುಪುವ ಅವಕಾಶವನ್ನು ಬಿಗ್‍ಬಾಸ್ ನೀಡಿದ್ದರು. ವಾರ ಪೂರ್ತಿ ಬಿಗ್‍ಬಾಸ್ ನೀಡುತ್ತಿದ್ದ ಟಾಸ್ಕ್ ಗೆಲುತ್ತಾ ವಾಸುಕಿ ವೈಭವ್ ನಾಲ್ಕು ಪದಕಗಳನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ‘ಬಿಗ್‍ಬಾಸ್ ಸೀಸನ್ 7’ ರಲ್ಲಿ ವಾಸುಕಿ ಮೊದಲ ಫೈನಲಿಸ್ಟ್ ಆಗಿ ಆಯ್ಕೆ ಆಗಿದ್ದಾರೆ.

ಬಿಗ್‍ಬಾಸ್ ನೀಡಿದ್ದ ಟಾಸ್ಕ್ ಗಳಲ್ಲಿ ವಾಸುಕಿ ವೈಭವ್ ಗೆದ್ದು ನಾಲ್ಕು ಪದಕಗಳನ್ನು ಪಡೆದುಕೊಂಡಿದ್ದರು. ಶೈನ್ ಎರಡು ಪದಕ ಗೆದ್ದಿದ್ದರು. ಅದೇ ರೀತಿ ಭೂಮಿ ಶೆಟ್ಟಿ, ದೀಪಿಕಾ ದಾಸ್, ಪ್ರಿಯಾಂಕಾ ಮತ್ತು ಹರೀಶ್ ರಾಜ್ ನಾಲ್ವರು ಒಂದೊಂದು ಪದಕವನ್ನು ಗೆದ್ದಿದ್ದರು. ಆದರೆ ವಾಸುಕಿ ಉತ್ತಮವಾಗಿ ಆಟವಾಡಿ ನಾಲ್ಕು ಪದಕವನ್ನು ಗೆದ್ದುಕೊಂಡಿದ್ದಾರೆ.

ಇನ್ನು ಫಿನಾಲೆ ತಲುಪಲು ಕೇವಲ ನಾಲ್ವರಿಗೆ ಮಾತ್ರ ಅವಕಾಶ. ಆ ನಾಲ್ಕು ಸ್ಪರ್ಧಿಗಳು ಯಾರಾಗಲಿದ್ದಾರೆ ಅನ್ನೋ ಕುತೂಹಲ ಇನ್ನೂ ಹಾಗೆಯೇ ಇದೆ. ಸದ್ಯ ಉಳಿದ ಆರು ಸ್ಪರ್ಧಿಗಳು ಮನೆಯಿಂದ ಹೊರಬರಲು ನಾಮಿನೇಟ್ ಆಗಿದ್ದಾರೆ. ಈ ಆರು ಸ್ಪರ್ಧಿಗಳಲ್ಲಿ ಇಬ್ಬರು ಮನೆಯಿಂದ ಔಟ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಯಾರು ಆ ಇಬ್ಬರು ಎನ್ನುವುದು ಪ್ರೇಕ್ಷಕರ ಕುತೂಹಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top